About Us

ಕ್ರೋಟಾನ್ ಲೈಫ್ ಪ್ರೈವೇಟ್ ಲಿಮಿಟೆಡ್ , 6 ಜನ ನಿರ್ದೇಶಕರೊಂದಿಗೆ,2024 ನೇ ಸೆಪ್ಟೆಂಬರ್ ನಲ್ಲಿ ತನ್ನ ಕಾರ್ಯರಂಭ ವನ್ನು ಮಾಡುತ್ತದೆ ನಮ್ಮ ಕಂಪನಿಯ ಮುಖ್ಯ ಶಾಖೆ, ಮೈಸೂರು ಜಿಲ್ಲೆಯ ಹುಣಸೂರು.ಈ ಕಂಪನಿ ನಮ್ಮೆಲ್ಲರ ಕನಸಿನ ಕೂಸು,ಎಲ್ಲರೂ ಕನಸನ್ನು ಕಾಣುವುದಿಲ್ಲ ಕಾಣುವವರೆಲ್ಲರೂ ಸಾಧಿಸಲಾಗುವುದಿಲ್ಲ ಉದ್ಯಮ ಕ್ಷೇತ್ರಕ್ಕೆ ಕಾಲಿಡಬೇಕೆಂದು ಕನಸನ್ನು ಕಾಣಲು ಪ್ರಾರಂಭಿಸಿ ಇಂದಿಗೆ ಈ ಕನಸನ್ನು ನನಸು ಮಾಡಿದ್ದೇವೆ,ಈ ಕ್ಷೇತ್ರದಲ್ಲಿ ನಮ್ಮದೇ ಆದಂತಹ ಚಾಪು ಮೂಡಿಸಲು ನಾವು ಹೊರಟಿದ್ದೇವೆ
“ ನಾವು ಮೊದಲು ಕನಸು ಕಾಣದೆ ಹೊರತು ಏನು ಆಗುವುದಿಲ್ಲ ´´
ಎಂಬ ಮಾತಿನಂತೆ ನಮ್ಮ ಅಳತೆ ಮೀರಿ ಏನಾದರೂ ಕಾಣಬಹುದೆಂದರೆ ಅದು ಕನಸು ಮಾತ್ರ
ನನಸ್ಸನ್ನು ಮಾಡುವ ಧ್ಯೇಯ, ಗುರಿ, ಧೈರ್ಯ, ನಂಬಿಕೆ,ಉತ್ಸಾಹ, ಬಲದೊಂದಿಗೆ ನಾವು ಬಂದಿದ್ದೇವೆ
ಹಳ್ಳಿ ಮಕ್ಕಳೂ ಸಹ ಕಾರ್ಪೊರೇಟ್ ಮಟ್ಟದಲ್ಲಿ ಕಂಪನಿ ಕಟ್ಟಿ ಬೆಳೆಸಬಹುದು ಹಾಗೂ ಅದನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು ಸಾಬೀತುಪಡಿಸಲು ಹೊರಟಿದ್ದೇವೆ
ಯಾವುದೇ ಸಹಕಾರವಿಲ್ಲದೆ ಯಾರು ಬೆಳೆಯಬೇಕೆಂದಿರುತ್ತಾರೋ ಅವರಿಗೆ ನಮ್ಮ ನಡೆ ಸ್ಪೂರ್ತಿ ಆಗಬೇಕು ಅದಕ್ಕೆ ಬೇಕಾದಂತಹ ಮೈಲಿಗಲ್ಲನ್ನು ಸೃಷ್ಟಿಸಲು ಹೊರಟಿದ್ದೇವೆ
ನಾವು ಈ ಕ್ರೋಟನ್ ಲೈಫ್ ಕಂಪನಿಯ ಶುರು ಮಾಡಬೇಕೆಂದು ಹೊರಟಾಗ ಅದು ಸುಲಭವಾಗಿರಲಿಲ್ಲ ಅಡೆತಡೆಗಳಿಗೆ ನಾವು ಕಿವಿಗೊಡದೆ ನಮ್ಮ ಗುರಿಯತ್ತ ಮುಖ ಮಾಡಿದೆವು, ದೃಢ ಸಂಕಲ್ಪ ಕೈಗೊಂಡೆವು ಒನ್ ಟೀಮ್ ಒನ್ ಡ್ರೀಮ್ ಎಂಬ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ

ಕ್ರೋಟಾನ್ ಎಂಬ ಹೆಸರು ಕೆಲವರಿಗೆ ಗೊಂದಲಕ್ಕೀಡಾಗಬಹುದು
ಕ್ರೋಟಾನ್ ಒಂದು ಆರ್ನಮೆಂಟಲ್ ಗಿಡವಾಗಿದೆ ಇದರ ರೂಪ ಹಾಗೂ ಬಣ್ಣ ನಮ್ಮ ವಾಸಸ್ಥಳ ಅಥವಾ ಕೆಲಸದ ಸ್ಥಳವನ್ನು ಹೆಚ್ಚು ಜೀವಂತವಾಗಿ ಮತ್ತು ಸಂತೋಷದಿಂದ ಅನುಭವಿಸುವ ಮೂಲಕ ನಮಗೆ ಉತ್ತಮ ಭಾವನೆಯನ್ನು ನೀಡುತ್ತದೆ
ಕ್ರೋಟಾನ್ ಗಿಡವು ಗಾಳಿಯನ್ನು ಶುದ್ದಿಕರಣ ಮಾಡುವ ಗುಣ ಹೊಂದಿದೆ ಈ ಸಸ್ಯದ ವಿಶೇಷತೆ ಹಾಗೂ ನಮ್ಮ ಕೆಲಸದ ವಿಶೇಷತೆ ಒಂದೇ ತರಹ ಇರುವುದರಿಂದ ಈ ನಮ್ಮ ಕಂಪನಿಗೆ ಇದೆ ಗಿಡದ ಹೆಸರನ್ನು ಇಟ್ಟಿದ್ದೇವೆ

ನಮ್ಮ ಕಂಪನಿಯ ಉದ್ದೇಶವು ಜನಸಾಮಾನ್ಯರಿಗೆ ತಮ್ಮ ಮನೆಗೆ ಉಪಯುಕ್ತ ಹಾಗೂ ಅಲಂಕಾರಿಕ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಕೊಡಬೇಕು ಹಾಗೂ ಗುಣಮಟ್ಟದಲ್ಲಿ ಹೆಸರುವಾಸಿಯಾಗಬೇಕೆಂದು ನಮ್ಮ ಯೋಜನೆ
ಒಂದೇ ಬಾರಿ ಕೊಳ್ಳುವವರಿಗೂ ಹಾಗೂ ಕಂತಿನ ರೂಪದಲ್ಲಿ ಅಂದರೆ ಉಳಿತಾಯದ ರೂಪದಲ್ಲಿ ಕೊಳ್ಳುವವರಿಗೂ ಅವಕಾಶವಿದ್ದು ಇದರಿಂದಾಗಿ ಜನರಿಗೆ ಹೆಚ್ಚು ಅನುಕೂಲಕರ ಮಾರ್ಗವನ್ನು ರೂಪಿಸಿದ್ದೇವೆ ಜನಸಾಮಾನ್ಯರಿಗೆ ಅನುಕೂಲಕರವಾಗಿ ಕೈಗೆಟುಕುವ ದರದಲ್ಲಿ ಉಪಕರಣಗಳನ್ನು ಕೊಡುವುದರ ಜೊತೆಗೆ ಡಿಸ್ಕೌಂಟ್ ನಿಂದ ಉಳಿತಾಯವಾದ ಹಣವನ್ನು ಅವರಿಗೆ ಬಹುಮಾನ ರೂಪದಲ್ಲಿ ಕೊಡುತ್ತಿದ್ದೇವೆ ಜೀವನವೆಂಬ ದಾರಿಯಲ್ಲಿ ಎಲ್ಲರಿಗೂ ಅದೃಷ್ಟವಾದ ವಸ್ತುಗಳು ಸಿಗುವುದಿಲ್ಲ ಅದೃಷ್ಟದ ರೀತಿಯಲ್ಲಿ ಕಂಪನಿಯು ಗ್ರಾಹಕರಿಗೆ ಬಹುಮಾನವನ್ನು ಸಹ ನೀಡಲಾಗುತ್ತದೆ.

ನಿಮ್ಮೆಲ್ಲರ ಪ್ರೀತಿ ಸಹಕಾರ ನಮ್ಮ ಕ್ರೋಟಾನ್ ಸಂಸ್ಥೆಯ ಮೇಲೆ ಇರಬೇಕು ಕಂಪನಿ ಯಾವ ಹಂತಕ್ಕೆ ಹೋದರು ನೀವು ಕೊಡುವ ಸಹಕಾರ ಎಂದು ಪ್ರತಿಬಿಂಬಿಸುತ್ತೇವೆ.

– ಕ್ರೋಟಾನ್ ಲೈಫ್ ಪ್ರೈವೇಟ್ ಲಿಮಿಟೆಡ್

ನಮ್ಮ ಉತ್ಪನ್ನಗಳಲ್ಲಿ ಪ್ರೋತ್ಸಾಹ ಮತ್ತು ವಿಶ್ವಾಸವನ್ನು ಮುಂದುವರೆಸಿದ ನಮ್ಮ ಮೌಲ್ಯಯುತ ಗ್ರಾಹಕರಿಗೆ ಧನ್ಯವಾದ ಹೇಳಲು ನಾನು ಈ ಅವಕಾಶವನ್ನು ತೆಗೆದುಕೊಳ್ಳುತ್ತೇನೆ ನಮ್ಮ ಅತ್ಯುತ್ತಮ ಸೇವೆಗಳನ್ನು ವಿಸ್ತರಿಸಲು ಮತ್ತು ಪರಸ್ಪರ ಸಮೃದ್ಧಿಯತ್ತ ಬೆಳೆಯಲು ನಮಗೆ ಪ್ರೇರೇಪಿಸುತ್ತದೆ.

ಮನು ಎಸ್
ವ್ಯವಸ್ಥಾಪಕ ನಿರ್ದೇಶಕ

ನಮ್ಮ ಉತ್ಪನ್ನಗಳಲ್ಲಿ ಪ್ರೋತ್ಸಾಹ ಮತ್ತು ವಿಶ್ವಾಸವನ್ನು ಮುಂದುವರೆಸಿದ ನಮ್ಮ ಮೌಲ್ಯಯುತ ಗ್ರಾಹಕರಿಗೆ ಧನ್ಯವಾದ ಹೇಳಲು ನಾನು ಈ ಅವಕಾಶವನ್ನು ತೆಗೆದುಕೊಳ್ಳುತ್ತೇನೆ ನಮ್ಮ ಅತ್ಯುತ್ತಮ ಸೇವೆಗಳನ್ನು ವಿಸ್ತರಿಸಲು ಮತ್ತು ಪರಸ್ಪರ ಸಮೃದ್ಧಿಯತ್ತ ಬೆಳೆಯಲು ನಮಗೆ ಪ್ರೇರೇಪಿಸುತ್ತದೆ.

ಮನು ಎಸ್
ವ್ಯವಸ್ಥಾಪಕ ನಿರ್ದೇಶಕ

ನಮ್ಮ ಕ್ರೋಟಾನ್ ಕಂಪನಿಯು ಮಧ್ಯಮ ವರ್ಗದ ಕುಟುಂಬಗಳ ಅವಶ್ಯಕತೆಗಳನ್ನು ಪೂರೈಸಲು ಹುಟ್ಟಿದೆ, ನಾವು ಅಗತ್ಯವಿರುವ ಪೂರಕ ಕೆಲಸವನ್ನು ಮಾಡಲು ಬದ್ಧರಾಗಿದ್ದೇವೆ.

ರವಿ ಕುಮಾರ್ (ಸಿ ಇ ಓ)
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಕ್ರೋಟನ್ ಲೈಫ್‌ಗೆ ಸುಸ್ವಾಗತ ಮಧ್ಯಮ ವರ್ಗದ ಜನರಿಗೆ ತಮ್ಮ ಕನಸನ್ನು ನನಸಾಗಿಸಲು ಸುವರ್ಣಾವಕಾಶವಾಗಿದೆ, ಗ್ರಾಹಕರು ತಮ್ಮ ಉಳಿತಾಯ ಯೋಜನೆಯ ಮೂಲಕ ಬಯಸಿದ ಎಲೆಕ್ಟ್ರಾನಿಕ್ಸ್ ಮತ್ತು ಮರದ ಪೀಠೋಪಕರಣಗಳನ್ನು ಪಡೆಯಬಹುದು ಮತ್ತು ಲಕ್ಕಿ ಡ್ರಾ ಕೂಡ ಇರುತ್ತದೆ. ಬಹುಮಾನವಾಗಿ ಉಡುಗೊರೆಯನ್ನೂ ಪಡೆಯಬಹುದು, ಸಂಸ್ಥೆಯ ಅಭಿವೃದ್ಧಿಗೆ ಎಲ್ಲರೂ ಈ ಸಂಸ್ಥೆಯೊಂದಿಗೆ ಕೈಜೋಡಿಸಬೇಕಾಗಿ ವಿನಂತಿ.

ಶ್ರೀನಿವಾಸ್ ಹುಣಸೂರು
– ಸಿ.ಒ.ಒ (ಮುಖ್ಯ ಕಾರ್ಯನಿರ್ವಹಣಾಧಿಕಾರಿ)

ನಿಮ್ಮ ಮನಸ್ಸನ್ನು ಬದಲಾಯಿಸಲು ಸಾಧ್ಯವಾದರೆ, ನಿಮ್ಮ ಜೀವನವನ್ನು ನೀವು ಬದಲಾಯಿಸಬಹುದು.

ರಾಜನಾಯಕ
ಮುಖ್ಯ ಹಣಕಾಸು ಅಧಿಕಾರಿ

ಎಂದಿಗೂ ಕನಸು ಕಾಣುವುದನ್ನು ನಿಲ್ಲಿಸಬೇಡಿ, ನಂಬುವುದನ್ನು ನಿಲ್ಲಿಸಬೇಡಿ, ಪ್ರಯತ್ನಿಸುವುದನ್ನು ನಿಲ್ಲಿಸಬೇಡಿ ಮತ್ತು ಕಲಿಯುವುದನ್ನು ನಿಲ್ಲಿಸಬೇಡಿ ಜೀವನಕ್ಕೆ ಅಡಿಪಾಯವೇ ಕಲಿಕೆ

 ಮನು ಬಿ ಕೆ
ಮುಖ್ಯ ಮಾಹಿತಿ ಅಧಿಕಾರಿ

“ಮಧ್ಯಮ ವರ್ಗದ ಜನರಿಗೆ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಕ್ರೋಟನ್ ಲೈಫ್ ಪ್ರೈವೇಟ್ ಲಿಮಿಟೆಡ್ ಉತ್ತಮ ಆಯ್ಕೆಯಾಗಿದೆ”

ರಾಕೇಶ್ ಎಂ ರಾವ್
ಮುಖ್ಯ ಪ್ರಯಾಣ ವ್ಯವಸ್ಥಾಪಕ

ಯಶಸ್ಸು ಎಂದರೆ , ಕಠಿಣ ಪರಿಶ್ರಮ, ವೈಫಲ್ಯದಿಂದ ಕಲಿಯುವಿಕೆ, ನಿಷ್ಠೆ ಮತ್ತು ನಿರಂತರತೆಯ ಫಲಿತಾಂಶವಾಗಿದೆ.
ಕ್ರೊಟಾನಿಯನ್ ಎಂದು ಹೆಮ್ಮೆಪಡುತ್ತೇನೆ

ಭರತ್ ಸಾಗರ್
ಮುಖ್ಯ ತಾಂತ್ರಿಕ ಅಧಿಕಾರಿ